




Hassan, May. 21: The Vidyarambha program was organized in Rashtrotthana Vidya Kendra – Hassan.Sri Sri Sri Vidyaprasanna Tirtha Swamiji, Kukke Subramanya Matha had arrived for the program.
While delivering the introductory remarks, Sri Dinesh Hegde, General
Secretary of Rashtrotthana Parishath, recalled the difficulties faced while establishing Rashtrotthana Vidya Kendra in Hassan district and the encouragement of the parents and the faith the parents had in Rashtrotthana Vidya Kendra. He said that education based on Indian history, heritage and culture is available in Rashtrotthana Vidya Kendra and focuses on the holistic personality development of the students. He emphasized why one should get admission in Rashtrotthana Vidya Kendra. “Indian students should become No. 1 students in the world,” he expressed his hope. Sri Sri Sri Vidyaprasanna Tirtha Swamiji blessed the students and taught them the mantra. All the students recited the Shlokas and Ganapati and Saraswati Stuti. Books of various titles were given by the nectar-filled hands of Swamiji. Humans are special, intelligent and skilful. In his blessing, he said that we should all utilize these with Dharma. Swamiji assured all the parents that education according to Indian Sanatana culture and tradition will be available at the Rashtrotthana Vidya Kendra.He expressed the wish that the Rashtrotthana Vidya Kendra should be established in all the districts.
ಹಾಸನ, ಮೇ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠ, ಅವರು ಆಗಮಿಸಿದ್ದರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ
ದಿನೇಶ್ ಹೆಗ್ಡೆ ಅವರು ಹಾಸನ ಜಿಲ್ಲೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವನ್ನು ಸ್ಥಾಪಿಸುವಾಗಿನ ಎದುರಾಗಿರುವ ತೊಂದರೆಗಳನ್ನು ಹಾಗೂ ಪಾಲಕರ ಪ್ರೋತ್ಸಾಹವನ್ನು, ಪಾಲಕರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿಟ್ಟ ನಂಬಿಕೆಯನ್ನು ನೆನಪಿಸಿಕೊಂಡರು.ರಾಷ್ಟ್ತೋತ್ಥಾನ ವಿದ್ಯಾಕೇಂದ್ರದಲ್ಲಿ ಭಾರತೀಯ ಇತಿಹಾಸ, ಪರಂಪರೆ ಸಂಸ್ಖರತಿಯ ಆಧಾರಿತ ಶಿಕ್ಷಣವು ಲಭಿಸುತ್ತಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸದತ್ತ ಗಮನ ನೀಡುತ್ತದೆ ಎಂದರು.ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಯಾಕೆ ಪ್ರವೇಶ ಪಡೆಯಬೇಕು ಎನ್ನುವುದನ್ನು ಒತ್ತಿ ಹೇಳಿದರು. “ಭಾರತೀಯ ವಿದ್ಯಾರ್ಥಿಗಳು ವಿಶ್ವದಲ್ಲೇ ನಂ. 1 ವಿದ್ಯಾರ್ಥಿಗಳಾಗಬೇಕು” ಎಂದು ಆಶಯ
ವ್ಯಕ್ತಪಡಿಸಿದರು. ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥಸ್ವಾಮೀಜಿಯವರು ಆಶೀರ್ವಚನ ನೀಡುತ್ತ ಮಂತ್ರವನ್ನು ಹೇಳಿಕೊಟ್ಟರು. ಎಲ್ಲ ವಿದ್ಯಾರ್ಥಿಗಳೂ ಶ್ಲೋಕ ಮತ್ತು ಗಣಪತಿ ಮತ್ತು ಸರಸ್ವತಿ ಸ್ತುತಿಯನ್ನು ಉಚ್ಛರಿಸಿದರು. ವಿವಿಧ ಶೀರ್ಷಿಕೆಗಳ ಪುಸ್ತಕಗಳನ್ನು ಸ್ವಾಮೀಜಿಗಳ ಅಮೃತ ಹಸ್ತದಿಂದ ನೀಡಲಾಯಿತು. ಮಾನವರು ವಿಶೇಷವೂ, ಬುದ್ಧಿವಂತರೂ, ಕೌಶಲ್ಯಪೂರ್ಣರೂ ಆಗಿದ್ದಾರೆ. ಇವುಗಳನ್ನು ಧರ್ಮದಿಂದ ನಾವೆಲ್ಲರೂ ಬಳಸಿಕೊಳ್ಳಬೇಕು ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು. ಸ್ವಾಮೀಜಿಯವರು ಎಲ್ಲ ಪಾಲಕರಲ್ಲೂ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ
ಭಾರತೀಯ ಸನಾತನ ಸಂಸ್ಕೃತಿ ಮತ್ತು ಪರಂಪರೆಗನುಗುಣವಾದ ಶಿಕ್ಷಣ ದೊರಕುತ್ತದೆ ಎಂದು ಭರವಸೆ ನೀಡಿದರು. ರಾಷ್ಟ್ರೋತ್ಥಾನ ವಿದ್ಯಾಕೆಂದ್ರವು ಎಲ್ಲ ಜಿಲ್ಲೆಗಳಲ್ಲೂ ಸ್ಥಾಪಿತವಾಗಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.