Ahilyabai Holkar Jayanti Celebration in RVK – Hassan



Hassan, May 31: The 300th birth anniversary of Lokmate Ahilyabai Holkar was celebrated herein Rashtrotthana Vidya Kendra – Hassan. Pradhancharya Smt. Uma Patil spoke inspiring things to the students about the life achievements of Lokmate Ahilyabai Holkar. The credit goes to Ahilyabai for building the first women’s army. The credit goes to Rajmata Ahilyabai Holkar for protecting and reviving Hindu temples. She worked for the welfare of her subjects, for the unity of India, and all her wealth and power belonged to Shiva and she was only following his orders. She was a rare personality that the country had never seen before. She told the children that any celebrations done in school should not be kept to themselves but should be shared with their family members and friends.
ಹಾಸನ, ಮೇ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ವರ್ಷದ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಪ್ರಧಾನಚಾರ್ಯ ಶ್ರೀಮತಿ ಉಮಾ ಪಾಟೀಲ್ ಅವರು ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣದಾಯಕ ವಿಷಯಗಳನ್ನು ನುಡಿದರು. ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದಂತಹ ಅಹಲ್ಯಬಾಯಿಯವರಿಗೆ ಸಲ್ಲುತ್ತದೆ. ಹಿಂದೂ ಮಂದಿರಗಳನ್ನು ರಕ್ಷಿಸಿ ಮತ್ತು ಪುನರುತ್ಥಾನ ಮಾಡಿದಂತಹ ಕೀರ್ತಿ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಸಲ್ಲುತ್ತದೆ. ತನ್ನ ಪ್ರಜೆಗಳ ಹಿತಕ್ಕಾಗಿ, ಭಾರತದ ಏಕಾತ್ಮತೆಗಾಗಿ, ಕಾರ್ಯನಿರ್ವಹಿಸಿ ತನ್ನ ಸಮಸ್ತ ಸಂಪತ್ತು, ಅಧಿಕಾರ ಎಲ್ಲವೂ ಶಿವನಿಗೆ ಸೇರಿದ್ದಾಗಿದ್ದು ತಾನು ಕೇವಲ ಅವನ ಆಜ್ಞ ಪಾಲನೆ ಮಾಡುತ್ತಿದ್ದೇನೆ ಎಂಬ ಭಾವದಿಂದ ರಾಜ್ಯಭಾರ ಮಾಡುತ್ತಿದ್ದ ದೇಶ ಹಿಂದೆಂದೂ ಕಂಡಿಲ್ಲದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು. ಶಾಲೆಯಲ್ಲಿ ಮಾಡಿದಂತಹ ಯಾವುದೇ ಆಚರಣೆಗಳನ್ನು ವಿದ್ಯಾರ್ಥಿಗಳು ತಮಗೆ ಮಾತ್ರ ಮೀಸಲಿಡದೆ ತಮ್ಮ ಕುಟುಂಬ ಸದಸ್ಯರಿಗೆ ಮತ್ತು ತಮ್ಮ ಸ್ನೇಹಿತರಿಗೆ ಹಂಚಿಕೊಳ್ಳಬೇಕು ಎಂದು ಅವರು ಮಕ್ಕಳಿಗೆ ತಿಳಿಸಿದರು.