Parents Orientation Program in RVK - Hassan






Hassan, June 7: Parents Orientation Program was organized herein Rashtrotthana Vidya Kendra – Hassan for the parents of Gokulam, Pre-KG, LKG and UKG and classes 1 and 2. At the beginning of the program, the teachers introduced themselves. The Principal gave a brief explanation about the establishment of the school, Panchamukhi education and Pancha Parivartan and how important it is to teach discipline and culture in the students. The parents were informed about the school academic. They were informed about the celebrations in the school and general instructions were given. Finally, an interaction was organized in the form of questions and answers for the parents to clear their doubts.
ಹಾಸನ, ಜೂ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಪಾಲಕರಿಗಾಗಿ ಶಾಲಾ ಚಟುವಟಿಕೆಗಳ ಪರಿಚಯ ಕಾರ್ಯಕ್ರಮವನ್ನುಗೋಕುಲಂ, ಪ್ರೀ-ಕೆಜಿ, ಎಲ್‍ಕೆಜಿ ಮತ್ತು ಯುಕೆಜಿ ಹಾಗೂ 1 ಮತ್ತು 2ನೇ ತರಗತಿಯ ಪಾಲಕರಿಗಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ಶಿಕ್ಷಕರು ತಮ್ಮ ಪರಿಚಯವನ್ನು ಮಾಡಿದರು. ಪ್ರಧಾನಾಚಾರ್ಯರು ಶಾಲಾ ಸ್ಥಾಪನೆ, ಪಂಚಮುಖೀ ಶಿಕ್ಷಣ ಹಾಗೂ ಪಂಚ ಪರಿವರ್ತನೆ ಮತ್ತು ವಿದ್ಯಾರ್ಥೀಗಳಲ್ಲಿ ಶಿಸ್ತು ಮತ್ತು ಸಂಸ್ಕಾರವನ್ನು ಕಲಿಸುವುದು ಎಷ್ಟು ಮುಖ್ಯವಾಗುತ್ತದೆ ಎನ್ನುವುದನ್ನು ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು. ಪಾಲಕರಿಗೆ ಶೈಕ್ಷಣಿಕ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ಶಾಲೆಯಲ್ಲಿನ ಆಚರಣೆಗಳ ಬಗ್ಗೆ ತಿಳಿಸಲಾಯಿತು ಸಾಮಾನ್ಯ ಸೂಚನೆಗಳನ್ನು ನೀಡಲಾಯಿತು. ಅಂತಿಮವಾಗಿ ಪ್ರಶ್ನೋತ್ತರಗಳ ರೂಪದಲ್ಲಿ ಪಾಲಕರು ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಲಿಕ್ಕೆ ಸಂವಾದವನ್ನು ಏರ್ಪಡಿಸಲಾಯಿತು.