International Yoga Day Celebration in RVK - Hassan










Hassan, June 21: International Yoga Day was celebrated herein Rashtrotthana Vidya Kendra – Hassan. The Chief Guests were Sri Sachin T.R., B.E.O. Superintendent of the office and Director of Patanjali Yoga Bhavan Trust. The Chief Guests spoke and told how yoga has reached the world today. He said that the Ashtanga Yoga path should be followed. A Walkathon was taken out from Patanjali Circle in Hassan to Mahatma Gandhi Road. On that occasion, students performed a dance performance to spread the importance of the day. A placard was displayed to spread the importance of yoga. Slogans were shouted. The yoga walk ended with garlanding of flowers to Patanjali Maharishi. A total of 830 students, 53 teachers and 50 parents participated in it.
ಹಾಸನ, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಸಚಿನ್ ಟಿ.ಆರ್., ಬಿ.ಇ.ಒ. ಕಛೇರಿಯ ಸೂಪರಿಂಟೆಂಡೆಂಟ್ ಹಾಗೂ ಪತಂಜಲಿ ಯೋಗ ಭವನ ಟ್ರಸ್ಟ್‌ನ ನಿರ್ದೇಶಕರು, ಇವರು ಆಗಮಿಸಿದ್ದರು. ಮುಖ್ಯ ಅತಿಥಗಳು ಮಾತನಾಡುತ್ತ, ಇಂದು ಯೋಗವು ವಿಶ್ವವನ್ನು ಹೇಗೆ ತಲಪಿದೆ ಎನ್ನುವುದನ್ನು ಹೇಳಿದರು. ಅಷ್ಟಾಂಗ ಯೋಗಮಾರ್ಗವನ್ನು ಅನುಸರಿಸಬೇಕು ಎಂದರು. ಹಾಸನದ ಪತಂಜಲಿ ವೃತ್ತದಿಂದ ಮಹಾತ್ಮಾ ಗಾಂಧಿ ರಸ್ತೆಯ ವರೆಗೆ ಯೋಗನಡಿಗೆಯನ್ನು ನಡೆಸಲಾಯಿತು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ದಿನದ ಮಹತ್ತ್ವವನ್ನು ಸಾರುವ ನೃತ್ಯ ಪ್ರದರ್ಶನ ಮಾಡಿದರು. ಯೋಗದ ಮಹತ್ತ್ವವನ್ನು ಸಾರುವ ಫಲಕವನ್ನು ಪ್ರದರ್ಶಿಸಲಾಯಿತು. ಘೋಷಣೆಗಳನ್ನು ಕೂಗಲಾಯಿತು. ಪತಂಜಲಿ ಮಹರ್ಷಿಗಳಿಗೆ ಹೂವಿನಹಾರ ಹಾಕುವ ಮೂಲಕ ಯೋಗನಡಿಗೆಯನ್ನು ಮುಗಿಸಲಾಯಿತು. ಒಟ್ಟು 830 ವಿದ್ಯಾರ್ಥಿಗಳು, 53 ಶಿಕ್ಷಕರು ಹಾಗೂ 50 ಪಾಲಕರು ಇದರಲ್ಲಿ ಭಾಗವಹಿಸಿದ್ದರು.