Aksharabhyas and Vidyarambha Programme in RVK - Hassan






Hassan, June 2: Aksharabhyas and Vidyarambha Programme were organised for Pre-KG and LKG children and U-KG and Class 1 and 2 children herein Rashtrotthana Vidya Kendra – Hassan. Ceremony, which began with a Ganapati Homa. His Holiness Jagadguru Sri Nirmalanandanath Mahaswamiji of Adichunchanagiri Mahasamsthan Math was received with a traditional Poorna Kumbh reception. Nirmalananda Nath Swamiji blessed the children by guiding them to write “Om” on rice and taught them their first lesson through shlokas and Panchamantras. As Vivekananda said, if India remains, the world will remain, and if India perishes, the world perishes, similarly, the nation will rise through the rise of the child of Rashtrotthana. Sri N. Dinesh Hegde, General Secretary of Rashtrotthana Parishath, in his introductory speech, spoke about the service activities being carried out by Rashtrotthana Parishath. Our children should not forget Indian values, knowledge heritage, and cultured education along with modern education. He said that by providing valuable education to children along with modern education, our country should be made a world teacher. Young children participated in the program with their parents and received their first lesson by seeking the grace of Goddess Saraswati.
ಹಾಸನ, ಜೂ. 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಪ್ರೀಕೆಜಿ ಮತ್ತು ಎಲ್.ಕೆ.ಜಿ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಯು.ಕೆ.ಜಿ ಮತ್ತು 1 ಮತ್ತು 2ನೇ ತರಗತಿಯ ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾರಂಭವು ಗಣಪತಿ ಹೋಮದೊಂದಿಗೆ ಪ್ರಾರಂಭವಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರನ್ನು ಸಾಂಪ್ರದಾಯಿಕ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನಿರ್ಮಲಾನಂದನಾಥ ಸ್ವಾಮೀಜಿಯವರು ಮಕ್ಕಳಿಗೆ ಅಕ್ಕಿಯ ಮೇಲೆ ” ಓಂ” ಬರೆಯಲು ಮಾರ್ಗದರ್ಶನ ನೀಡುವ ಮೂಲಕ ಆಶೀರ್ವದಿಸಿ ಮಕ್ಕಳಿಗೆ ಶ್ಲೋಕ ಮತ್ತು ಪಂಚಮಂತ್ರಗಳ ಮುಖಾಂತರ ಪ್ರಥಮ ಪಾಠ ಬೋಧನೆಯನ್ನು ಮಾಡಿದರು. ವಿವೇಕಾನಂದರ ಹೇಳಿಕೆಯಂತೆ ಭಾರತ ಉಳಿದರೆ ಪ್ರಪಂಚ ಉಳಿಯುತ್ತದೆ ಭಾರತ ಅಳಿದರೆ ಪ್ರಪಂಚ ಅಳಿಯುತ್ತದೆ ಹಾಗೆಯೇ ರಾಷ್ಟ್ರೋತ್ಥಾನ ಮಗುವಿನ ಉತ್ಥಾನದ ಮೂಲಕ ರಾಷ್ಟ್ರದ ಉತ್ಥಾನ ಆಗುತ್ತದೆ ಎಂದು ಹೇಳಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ನಾ. ದಿನೇಶ್ ಹೆಗಡೆಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಮಾಡುತ್ತಿರುವ ಸೇವಾ ಚಟುವಟಿಕೆಗಳ ಬಗ್ಗೆ ತಿಳಿಸಿದರು. ನಮ್ಮ ಮಕ್ಕಳು ಆಧುನಿಕ ಶಿಕ್ಷಣದ ಜೊತೆಗೆ ಭಾರತೀಯ ಮೌಲ್ಯ, ಜ್ಞಾನ ಪರಂಪರೆ, ಸಂಸ್ಕಾರಯುತ ಶಿಕ್ಷಣವನ್ನು ಮರೆಯಬಾರದು. ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆಗೆ ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಮೂಲಕ ನಮ್ಮ ದೇಶವನ್ನು ವಿಶ್ವಗುರುವನ್ನಾಗಿ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳು ತಮ್ಮ ಪೋಷಕರೊಂದಿಗೆ ಭಾಗವಹಿಸಿ ಸರಸ್ವತಿ ದೇವಿಯ ಕೃಪೆಯನ್ನು ಕೋರುತ್ತ ತಮ್ಮ ಮೊದಲ ಪಾಠವನ್ನು ಪಡೆದರು.