Hindu Samrajyotsava Celebration in RVK – Hassan

Hassan, June 9: Hindu Samrajyotsava was celebrated herein Rashtrotthana Vidya Kendra – Hassan.The Pradhanacharya and teachers offered flowers to the portrait of Shivaji Maharaj. Assistant Teacher of Social Science Smt. Sushma gave a speech on Chhatrapati Shivaji Maharaj and highlighted how Shivaji was a Maratha king and a protector of Sanatana Dharma.The Pradhanacharya gave a lot of information about Chhatrapati Shivaji as a sign of respect and inspiration to our young minds and Shivaji’s mother Jijabai was telling inspiring and mind-blowing stories from Ramayana and Mahabharata. He said that historical ideals like Rama and Krishna inspired the Maharaj to become a protector of Dharma and made his son a great person. On this occasion, Smt. Seema spoke to the children about the Hindu Empire Day and said that we will celebrate this day, 6.06.1674, the day of the coronation of Chhatrapati Shivaji, as the Hindu Empire Day. She also told the children about Shivaji’s childhood, his achievements, the stories of Ramayana and Mahabharata that his mother Jijabai told him, and how he got inspired by listening to them and embraced Hinduism and the protection of Hindus, in the form of stories, and told them to instil respect and patriotism in the minds of the children. Two children of class 4A and Diya, Danveen, Kalpit P Gowda of Gokulam section participated in the role of Shivaji and Jijabai wearing national costumes. The slogan ‘Veer Shivaji Ambabhavani’ was raised.

ಹಾಸನ, ಜೂ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಹಿಂದೂ ಸಾಮ್ರಾಜ್ಯೋತ್ಸವವನ್ನು ಆಚರಿಸಲಾಯಿತು.ಪ್ರಧಾನಾಚಾರ್ಯರು ಮತ್ತು ಶಿಕ್ಷಕರು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಹೂವುಗಳನ್ನು ಅರ್ಪಿಸಿದರು.ಸಮಾಜ ವಿಜ್ಞಾನದ ಸಹಾಯಕ ಶಿಕ್ಷಕಿ ಶ್ರೀಮತಿ ಸುಷ್ಮಾ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಭಾಷಣ ಮಾಡಿ, ಶಿವಾಜಿ ಹೇಗೆ ಮರಾಠಾ ರಾಜ ಮತ್ತು ಸನಾತನ ಧರ್ಮದ ರಕ್ಷಕನಾಗಿದ್ದಾನೆ ಎಂಬುದನ್ನು ಎತ್ತಿ ತೋರಿಸಿದರು. ಪ್ರಧಾನಾಚಾರ್ಯರು ನಮ್ಮ ಯುವ ಮನಸ್ಸುಗಳಿಗೆ ಗೌರವ ಮತ್ತು ಪ್ರೇರಣೆಯ ಸಂಕೇತವಾಗಿ ಛತ್ರಪತಿ ಶಿವಾಜಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿ, ಶಿವಾಜಿಯ ತಾಯಿ ಜೀಜಾಬಾಯಿ ರಾಮಾಯಣ ಮತ್ತು ಮಹಾಭಾರತದ ಸ್ಪೂರ್ತಿದಾಯಕ ಮತ್ತು ಮನಸ್ಸಿಗೆ ಆಸಕ್ತಿದಾಯಕ ಕಥೆಗಳನ್ನು ಹೇಳುತ್ತಿದ್ದರು. ರಾಮ ಮತ್ತು ಕೃಷ್ಣರಂತಹ ಐತಿಹಾಸಿಕ ಆದರ್ಶ ವ್ಯಕ್ತಿಗಳು ಮಹಾರಾಜರು ಧರ್ಮ ರಕ್ಷಕರಾಗಲು ಪ್ರೇರೇಪಿಸಿ, ಮಗನನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡಿದರು ಎಂದರು. ಈ ಸಂದರ್ಭದಲ್ಲಿ ಶ್ರೀಮತಿ ಸೀಮಾ ಅವರು ಹಿಂದೂ ಸಾಮ್ರಾಜ್ಯ ದಿವಸದ ಬಗ್ಗೆ ಮಕ್ಕಳಿಗೆ ಹಿತ ನುಡಿಗಳನ್ನು ಹೇಳುವ ಮೂಲಕ ಛತ್ರಪತಿ ಶಿವಾಜಿಯವರ ಪಟ್ಟಾಭಿಷೇಕದ ದಿವಸವಾದ 6.06.1674 ಈ ದಿನವನ್ನು ಹಿಂದೂ ಸಾಮ್ರಾಜ್ಯ ದಿವಸವಾಗಿ ಆಚರಿಸುತ್ತೇವೆ ಎಂದು ಹೇಳಿದರು. ಹಾಗೂ ಶಿವಾಜಿಯವರ ಬಾಲ್ಯ, ಅವರ ಸಾಧನೆ ,ತಾಯಿ ಜೀಜಾಬಾಯಿ ಹೇಳುತ್ತಿದ್ದ ರಾಮಾಯಣ ಮಹಾಭಾರತದ ಕಥೆಗಳನ್ನು ಕೇಳುತ್ತಾ ಪ್ರೇರಣೆಯನ್ನು ಪಡೆದು ಹಿಂದುತ್ವ ಹಾಗೂ ಹಿಂದುಗಳ ರಕ್ಷಣೆಯನ್ನು ಮೈಗೂಡಿಸಿಕೊಂಡ ಬಗೆಯನ್ನು ಕಥೆಯ ರೂಪದಲ್ಲಿ ಮಕ್ಕಳಿಗೆ ಹೇಳಿ ,ಮಕ್ಕಳ ಮನಸ್ಸಿನಲ್ಲಿ ಶಿವಾಜಿಯ ಬಗ್ಗೆ ಗೌರವ ಹಾಗೂ ರಾಷ್ಟ್ರಪ್ರೇಮ ಮೂಡುವಂತೆ ತಿಳಿಸಿದರು. 4 ಎ ತರಗತಿಯ ಇಬ್ಬರು ಮಕ್ಕಳು ಹಾಗೂ ಗೋಕುಲಂ ವಿಭಾಗದ ದಿಯಾ, ದನ್ವೀನ್, ಕಲ್ಪಿತ್ ಪಿ ಗೌಡ ಅವರು ಶಿವಾಜಿ ಹಾಗೂ ಜೀಜಾಬಾಯಿ ಅವರ ಪಾತ್ರಧಾರಿಗಳಾಗಿ ದೇಶಭೂಷಣವನ್ನು ಧರಿಸಿ ಪಾಲ್ಗೊಂಡಿದ್ದರು.ʼವೀರ ಶಿವಾಜಿ ಅಂಬಾಭವಾನಿʼ ಘೋಷಣೆಯನ್ನು ಮೊಳಗಿಸಲಾಯಿತು.

Scroll to Top