





Hassan, Sept. 5: Teachers Day and Onam were celebrated herein Rashtrotthana Vidya Kendra – Hassan. The students spoke about the importance of Teachers Day and Onam. The Principal, Smt. Uma S. Patil, spoke about the sacrifice, service spirit, dedication and importance of teachers in building society. The students of the school participated in a program organized by Panchajanya Balaga on Ganesh Chaturthi. A memento was distributed to them by Smt. Nandini, a member of the steering committee of Rashtrotthana Vidya Kendra Hassan division.
ಹಾಸನ, ಸೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಮತ್ತು ಓಣಂ ಹಬ್ಬದ ಮಹತ್ವವನ್ನು ತಿಳಿಸಿದರು. ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್ ಪಾಟೀಲ್ ಅವರು ಶಿಕ್ಷಕರ ತ್ಯಾಗ, ಸೇವಾ ಮನೋಭಾವ, ಸಮರ್ಪಣ ಭಾವ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಮಹತ್ವವನ್ನು ಕುರಿತು ಮಾತನಾಡಿದರು. ಗಣೇಶ ಚತುರ್ಥಿಯಂದು ಪಾಂಚಜನ್ಯ ಬಳಗದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಿಗೆ ನೆನಪಿನ ಕಾಣಿಕೆಯನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಸನ ವಿಭಾಗದ ಸಂಚಾಲನ ಸಮಿತಿಯ ಸದಸ್ಯರಾದ ಶ್ರೀಮತಿ ನಂದಿನಿ ಅವರು ವಿತರಿಸಿದರು.