Vidyarambha Program Celebrated at RVK - Hassan

Hassan, May 27: A Vidyarambha program was organised for students of classes 1 to 3 at Rashtrotthana Vidya Kendra – Hassan. The program was graced by the divine presence of Sri Sri Sangameshwara Guru of Javenahalli Math. In his introductory remarks, Sri Shivaraj gave information about the Rashtrotthana Parishat and its various projects. He explained the role of the organisation in nation-building through education. In his benediction, the Guru spoke about the importance of education and the glory of Indian culture. He gave the message that, along with education, values and culture should be instilled in children. Later, he conducted the Vidyarambha program for students of classes 1 to 3 and wished them well for their educational journey.

ಹಾಸನ, ಮೇ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ1ರಿಂದ 3ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಜವೇನಹಳ್ಳಿ ಮಠದ ಶ್ರೀ ಶ್ರೀ ಸಂಗಮೇಶ್ವರ ಗುರುಗಳ ದಿವ್ಯ ಸಾನ್ನಿಧ್ಯ ದೊರಕಿತು. ಪ್ರಾಸ್ತಾವಿಕ ನುಡಿಗಳಲ್ಲಿ ಶ್ರೀ ಶಿವರಾಜ್ ಅವರು ರಾಷ್ಟ್ರೋತ್ಥಾನ ಪರಿಷತ್ ಹಾಗೂ ಅದರ ವಿವಿಧ ಪ್ರಕಲ್ಪಗಳ ಕುರಿತು ಮಾಹಿತಿ ನೀಡಿದರು. ಶಿಕ್ಷಣದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಥೆಯ ಪಾತ್ರವನ್ನು ವಿವರಿಸಿದರು. ತಮ್ಮ ಆಶೀರ್ವಚನದಲ್ಲಿ ಗುರುಗಳು ಶಿಕ್ಷಣದ ಮಹತ್ವ ಹಾಗೂ ಭಾರತದ ಸಾಂಸ್ಕೃತಿಕ ವೈಭವದ ಕುರಿತು ಮಾತನಾಡಿದರು. ಶಿಕ್ಷಣದ ಜೊತೆಗೆ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕೆಂಬ ಸಂದೇಶವನ್ನು ನೀಡಿದರು. ನಂತರ ಅವರು 1 ರಿಂದ 3ನೇ ತರಗತಿಯ ವಿದ್ಯಾರ್ಥಿಗಳ ವಿದ್ಯಾರಂಭ ನೆರವೇರಿಸಿ, ಅವರ ಶೈಕ್ಷಣಿಕ ಪಯಣಕ್ಕೆ ಶುಭ ಹಾರೈಸಿದರು.