




Hassan, Sept. 4: Sri Vijayendra trained and created awareness about the POSH (Prevention of Sexual Harassment) and POCSO (Protection of Children from Sexual Offences) Acts for drivers and support staff herein Rashtrotthana Vidya Kendra – Hassan. Complete training was given on driving rules, awareness of discipline, responsibility and accident management. Drivers were made aware of traffic rules, patience, peace and social responsibility. Driver training was given to train responsible drivers. The program explained the description of crimes under various acts, the method of filing a complaint, the need to create awareness about “good touch” and “bad touch” for child protection. The workshop also aimed to provide training and awareness.
ಹಾಸನ, ಸೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ ಶ್ರೀ ವಿಜಯೇಂದ್ರ ಅವರು ಚಾಲಕರು ಮತ್ತು ಸಹಾಯಕ ಸಿಬ್ಬಂದಿ ವರ್ಗದವರಿಗೆ ಪೋಷ್ (Prevention of Sexual Harassment) ಮತ್ತು ಪಾಕ್ಸೋ (Protection of Children from Sexual Offences) ಕಾಯ್ದೆಗಳ ಕುರಿತು ತರಬೇತಿ ಹಾಗೂ ಜಾಗೃತಿ ಮೂಡಿಸಿದರು. ರಾಷ್ಟ್ರೋತ್ಥಾನ ಶಾಲೆಯಲ್ಲಿ ವಾಹನ ಚಾಲನೆ ನಿಯಮ, ಶಿಸ್ತಿನ ಅರಿವು, ಜವಾಬ್ದಾರಿ ಹಾಗೂ ಅಪಘಾತ ನಿರ್ವಹಣೆ ಕುರಿತು ಸಂಪೂರ್ಣ ತರಬೇತಿಯನ್ನು ನೀಡಲಾಯಿತು. ಟ್ರಾಫಿಕ್ ನಿಯಮಗಳ ಪಾಲನೆ, ತಾಳ್ಮೆ, ಶಾಂತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಕುರಿತು ಚಾಲಕರಿಗೆ ಅರಿವು ಮೂಡಿಸಲಾಯಿತು. ಜವಾಬ್ದಾರಿಯುತ ಚಾಲಕರನ್ನು ತರಬೇತುಗೊಳಿಸುವ ಚಾಲಕರ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕಾಯ್ದೆಯಡಿಯಲ್ಲಿ ಅಪರಾಧಗಳ ವಿವರಣೆ, ದೂರು ಸಲ್ಲಿಸುವ ವಿಧಾನ, ಮಕ್ಕಳ ರಕ್ಷಣೆಗಾಗಿ “ಒಳ್ಳೆಯ ಸ್ಪರ್ಶ” ಮತ್ತು “ಕೆಟ್ಟ ಸ್ಪರ್ಶ” ಕುರಿತು ಜಾಗೃತಿ ಮೂಡಿಸುವ ಅಗತ್ಯವನ್ನು ವಿವರಿಸಲಾಯಿತು. ಜೊತೆಗೆ ತರಬೇತಿ ಮತ್ತು ಜಾಗೃತಿ ಮೂಡಿಸುವ ಉದ್ದೇಶ ಈ ಕಾರ್ಯಾಗಾರದಾಗಿತ್ತು.