











Hassan, June 22: The 12th International Yoga Day was celebrated herein Rashtrotthana Vidya Kendra – Hassan under the theme “Yoga for Healthy Ageing”. The Chief Guest was Sri Dr. Gurubasavaraj Yalagachchin, Ayurveda and Yoga Consultant, SDM Medical College, Hassan. The students explained the importance of International Yoga Day and the need to make Yoga an integral part of life. The Chief Guest Sri Dr. Gurubasavaraj Yalagachchin explained the necessity of Yoga in his speech. He told the students about the importance of drinking enough water for good health, quality sleep, limiting mobile usage, chewing food well, sitting postures during class and making Yoga a daily practice.
Later, all the students performed Yoga under the leadership of Sri Prashant, the school’s Yoga teacher. The students practiced pranayama, sitting asanas, and standing asanas. Then the Principal administered the oath to all the students on the occasion of Yoga Day.
ಹಾಸನ, ಜೂ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಆರೋಗ್ಯಕರ ವಯೋವೃದ್ಧಿಗಾಗಿ ಯೋಗ” ಎನ್ನುವ ವಿಷಯದಡಿಯಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯ, ಹಾಸನದ ಆಯುರ್ವೇದ ಮತ್ತು ಯೋಗ ಸಲಹೆಗಾರರಾದ ಶ್ರೀ ಡಾ. ಗುರುಬಸವರಾಜ ಯಲಗಚ್ಚಿನ್ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಯೋಗ ದಿನದ ಮಹತ್ವವನ್ನು ವಿವರಿಸಿ, ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವ ಅಗತ್ಯವನ್ನು ತಿಳಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಡಾ. ಗುರುಬಸವರಾಜ್ ಯಲಗಚ್ಚಿನ್ ಅವರು ತಮ್ಮ ಭಾಷಣದಲ್ಲಿ ಯೋಗದ ಅನಿವಾರ್ಯತೆಯನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯುವುದು, ಗುಣಮಟ್ಟದ ನಿದ್ರೆ, ಮೊಬೈಲ್ ಬಳಕೆಯನ್ನು ಮಿತಿಗೊಳಿಸುವುದು, ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವುದು, ತರಗತಿ ಅವಧಿಯಲ್ಲಿ ಕುಳಿತುಕೊಳ್ಳುವ ಆಸನಗಳ ಬಗ್ಗೆ ಹಾಗೂ ಯೋಗವನ್ನು ದಿನನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಳ್ಳುವ ಮಹತ್ವವನ್ನು ತಿಳಿಸಿದರು. ನಂತರ ಶಾಲೆಯ ಯೋಗ ಶಿಕ್ಷಕರಾದ ಶ್ರೀ ಪ್ರಶಾಂತ್ ಅವರ ನೇತೃತ್ವದಲ್ಲಿ ಎಲ್ಲಾ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ನಡೆಸಿದರು. ಪ್ರಾಣಾಯಾಮ, ಕುಳಿತು ಮಾಡುವ ಆಸನಗಳು ಹಾಗೂ ನಿಂತು ಮಾಡುವ ಆಸನಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿದರು. ನಂತರ ಪ್ರಧಾನಾಚಾರ್ಯರು ಯೋಗದಿನದ ಪ್ರಯುಕ್ತ ವಿದ್ಯಾರ್ಥಿಗಳೆಲ್ಲರಿಗೂ ಪ್ರಮಾಣವಚನ ಬೋಧಿಸಿದರು.