Vidyarambha Program in RVK - Hassan

Hassan, May 24: A Vidyarambha program was organized for students of classes 4 to 8 herein Rashtrotthana Vidya Kendra – Hassan. This program, which marks the auspicious beginning of the students’ educational journey, was conducted in a traditional and spiritual atmosphere. The program was graced by the divine presence of Sri Vidyadheesh Guru of Sri Sadhguru Avadhuta Venkatachal Sadhana Sthal, Banavar. In his introductory remarks, Sri Vasant Kumar gave information about the Rashtrotthana Parishath and its various projects. He explained the role of the organization in nation building through education. In his benediction, the Guru spoke about the importance of education and the glory of Indian culture. He gave the message that along with education, values and culture should be instilled in children. Later, he conducted the Vidyarambha of students of classes 4 to 8 and wished them well for their educational journey. The main attraction of this program was the release of the school’s annual issue (magazine) titled “Vardhini” by all the distinguished guests.

ಹಾಸನ, ಮೇ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದಲ್ಲಿ 4ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪಯಣಕ್ಕೆ ಶುಭಾರಂಭವನ್ನು ಸೂಚಿಸುವ ಈ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಶ್ರೀ ಸದ್ಗುರು ಅವಧೂತ ವೆಂಕಟಾಚಲ ಸಾಧನಾ ಸ್ಥಳ, ಬಾಣಾವರದ ಶ್ರೀ ವಿದ್ಯಾಧೀಶ ಗುರುಗಳ ದಿವ್ಯ ಸಾನ್ನಿಧ್ಯ ದೊರಕಿತು. ಪ್ರಾಸ್ತಾವಿಕ ನುಡಿಗಳಲ್ಲಿ ಶ್ರೀ ವಸಂತ್ ಕುಮಾರ್ ಅವರು ರಾಷ್ಟ್ರೋತ್ಥಾನ ಪರಿಷತ್ ಹಾಗೂ ಅದರ ವಿವಿಧ ಪ್ರಕಲ್ಪಗಳ ಕುರಿತು ಮಾಹಿತಿ ನೀಡಿದರು. ಶಿಕ್ಷಣದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಥೆಯ ಪಾತ್ರವನ್ನು ವಿವರಿಸಿದರು. ತಮ್ಮ ಆಶೀರ್ವಚನದಲ್ಲಿ ಗುರುಗಳು ಶಿಕ್ಷಣದ ಮಹತ್ವ ಹಾಗೂ ಭಾರತದ ಸಂಸ್ಕೃತಿಯ ವೈಭವದ ಕುರಿತು ಮಾತನಾಡಿದರು. ಶಿಕ್ಷಣದ ಜೊತೆಗೆ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕೆಂಬ ಸಂದೇಶವನ್ನು ನೀಡಿದರು. ನಂತರ ಅವರು 4ರಿಂದ 8ನೇ ತರಗತಿಯ ವಿದ್ಯಾರ್ಥಿಗಳ ವಿದ್ಯಾರಂಭ ನೆರವೇರಿಸಿ, ಅವರ ಶೈಕ್ಷಣಿಕ ಪಯಣಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶಾಲೆಯ “ವರ್ಧಿನಿ” ಎಂಬ ಶಾಲಾ ವಾರ್ಷಿಕ ಸಂಚಿಕೆ (ಮ್ಯಾಗಜಿನ್) ಅನ್ನು ಎಲ್ಲಾ ಗಣ್ಯ ಅತಿಥಿಗಳು ಬಿಡುಗಡೆ ಮಾಡಿದರು.